

25th April 2025

ಮಲ್ಲಮ್ಮ ನುಡಿ ವಾರ್ತೆ
ಕೊಪ್ಪಳ: ಇಂದು ನಗರದ ಪ್ರವಾಸಿ ಮಂದಿರದಿಂದ ಅಶೋಕ ವೃತ್ತದ ವರೆಗೆ ಕೇಂದ್ರದ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿ ಅಶೋಕ ವೃತ್ತದಲ್ಲಿ ಪ್ರತಿಭಟಿಸಿ ತಹಶಿಲ್ದಾರ ವಿಠ್ಠಲ್ ಚೌಗಲೆ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷರಾದ ಲಿಂಗೇಶ ಕಲ್ಗುಡಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾರಡ್ಡಿ ಗಲಿಬಿ, ಕಾಂಗ್ರೆಸ್ ಮುಖಂಡರಾದ ಜ್ಯೋತಿ ಎಂ. ಗೊಂಡಬಾಳ, ಕಾರ್ಮಿಕ ಘಟಕ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪಂಡಿತ,
ಜಿಲ್ಲಾ ಉಪಾಧ್ಯಕ್ಷ ಗವಿಸಿದ್ದನಗೌಡ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ಮಲ್ಲಾಡದ, ಸಾಹಿಲ್ ಸಾಬ್, ಖಲಂದರ್ ಸಾಬ್, ಬ್ಲಾಕ್ ಅಧ್ಯಕ್ಷರುಗಳಾದ ಈರಣ್ಣ ಬದಾಮಿ ಕುಷ್ಟಗಿ, ಅಯ್ಯಪ್ಪ ಹವಾಲ್ದಾರ್, ನಾಗರಾಜ ಭಂಗಿ ಯಲಬುರ್ಗಾ, ಜೋಗದ ರವಿ ಗಂಗಾವತಿ ವಿಧಾನಸಭಾ, ಬಾಬರ್ ಗಂಗಾವತಿ ನಗರ, ಸಿದ್ದು ಹೊಸಮಠ ಗಂಗಾವತಿ ಗ್ರಾಮೀಣ, ದೇವರಾಜ ಕಟ್ಟಿಮನಿ ಕನಕಗಿರಿ ವಿಧಾನಸಭಾ, ಮಂಜುನಾಥ ನಾಗಲಾಪೂರ ಕನಕಗಿರಿ ನಗರ, ಸುನೀಲ್ಮೂಲಿಮನಿ ಕಾರಟಗಿ ನಗರ, ಬಸು ಮೈಲಾಪುರ, ವಿಜಯ ಕಂಬಳಿ, ಹನುಮೇಶ ಹಿರೇಖೇಡ, ಶಿವು, ನಾಗರಾಜ, ಪಂಚಾಕ್ಷರಿ, ಅಮರೇಶ ಮಡಿವಾಳ, ಹನುಮೇಶ ಅಂಟರಠಾಣಾ ಇತರರು ಇದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕಿ ಜ್ಯೋತಿ ಎಂ. ಗೊಂಡಬಾಳ ಕೇಂದ್ರ ಸರಕಾರ ಕೇವಲ ಜನರ ಮೇಕೆ ಭಾರ ಹಾಕುವ ಕೆಲಸದಲ್ಲಿ ನಿರತವಾಗಿದೆ, ಜಿಎಸ್ಟಿ, ಗ್ಯಾಸ್, ಪೆಟ್ರೋಲ್, ಡೀಸೆಲ್, ಸಿಎನ್ ಜಿ ಎಲ್ಲವೂ ದುಬಾರಿ ಇಂತಹ ದುಬಾರಿ ಸಮಸ್ಯೆ ಮುಚ್ಚಿಹಾಕಲು ಇಲ್ಲದ ಸಮಸ್ಯೆ ತಂದು ನಿಲ್ಲಿಸುವ ಕೆಲಸ ಮಾಡುವ ಜೊತೆಗೆ ಬಡವರಿಗೆ ಆಸರೆಯಾದ ಗ್ಯಾರಂಟಿ ಕಾಂಗ್ರೆಸ್ ಸರಕಾರ ಟೀಕಿಸಿ ಪ್ರತಿಭಟಿಸುತ್ತಿರುವದು ನಿಜಕ್ಕೂ ನಾಚಿಕೆಗೇಡಿತನ. ಬಿಜೆಪಿಯ ಮೋದಿಶಾ ಕೂಡಲೇ ಬೆಲೆ ಇಳಿಸುವ ಕೆಲಸ ಮಾಡಲಿ, ರಾಜ್ಯದ ತೆರಿಗೆ ಪಾಲು ನೀಡಲಿ ಎಂದರು. ಮಾಜಿ ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಗವಿಸಿದ್ದನಗೌಡ ಪಾಟೀಲ್ ಮಾತನಾಡಿ, ಸರಕಾರ ಜನರಿಗೆ ಮೋಸ ಮಾಡುತ್ತಿದ್ದರೂ ಇಲ್ಲಿನ ಭ್ರಷ್ಟ, ಅಂಡು ಸುಟ್ಟುಕೊಂಡ ಬಿಜೆಪಿ ಸಂಸದರು ಶಕ್ತಿಹೀನರಾಗಿ ಮನೆಯಲ್ಲಿ ಕುಳಿತಿದ್ದು ಎದ್ದು ಬಂದು ಕರ್ನಾಟಕ ಪರ ಮಾತನಾಡಲಿ ಎಂದು ಕಿಡಿಕಾರಿದರು. ಯುವ ಜಿಲ್ಲಾ ಅಧ್ಯಕ್ಷ ಲಿಂಗೇಶ ಕಲ್ಗುಡಿ ಮಾತನಾಡಿ, ಇದು ಕೇವಲ ಆರಂಭದ ಹೋರಾಟವಾಗಿದ್ದು ಕೇಂದ್ರದ ಮಲತಾಯಿ ಧೋರಣೆ, ಬಡವರ ವಿರೋಧಿ ಮತ್ತು ಬಂಡವಾಳಶಾಯಿ ಧೋರಣೆ ಖಂಡಿಸಿ ನಿರಂತರ ಹೋರಾಟ ಮಾಡುತ್ತೇವೆ ಎಂದರು.

ಸಾಮಾಜಿಕ ನಾಟಕಗಳನ್ನು ನೋಡಿ ಹೆಚ್ಚು ಪ್ರೋತ್ಸಾಹಿಸಿ : ಉಪನ್ಯಾಸಕ ಸಿಎಂ ಚನ್ನಬಸಯ್ಯಸ್ವಾಮಿ ಅಭಿಪ್ರಾಯ

ಶ್ರೀಶೈಲಗಿರಿ ಪ್ರಕಾಶನ ಬೆಳಗಾವಿ ರವರಿಂದ ಸಾಹಿತಿ ಬಿ.ಕೆ. ಮಲಾಬಾದಿಯವರ ಕೃತಿ ಲೋಕಾರ್ಪಣೆ - ಜೀವನದ ಆದರ್ಶಗಳನ್ನು ಒತ್ತಿ ಹೇಳುವ ಕೃತಿಗಳು ಎಲ್ಲರಿಗೂ ಮಾರ್ಗದರ್ಶಿ-- -ಎಸಿಪಿ ನಾರಾಯಣ ಬರಮನಿ ಅಭಿಮತ